ಜೆಕ್ ಗಣರಾಜ್ಯವು ಮಧ್ಯ ಯುರೋಪಿನಲ್ಲಿರುವ ಒಂದು ರಾಷ್ಟ್ರ. ಇದು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಜೆಕ್ ಗಣರಾಜ್ಯವು ಉತ್ತರದಲ್ಲಿ ಪೋಲಂಡ್, ಪಶ್ಚಿಮ ಮತ್ತು ವಾಯವ್ಯದಲ್ಲಿ ಜರ್ಮನಿ, ದಕ್ಷಿಣದಲ್ಲಿ ಆಸ್ಟ್ರಿಯಾ ಮತ್ತು ಪೂರ್ವದಲ್ಲಿ ಸ್ಲೊವಾಕಿಯಾಗಳೊಂದಿಗೆ ಭೂಗಡಿ ಹೊಂದಿದೆ. ಹೀಗಾಗಿ ಈ ರಾಷ್ಟ್ರಕ್ಕೆ ಸಮುದ್ರತೀರವಿರುವುದಿಲ್ಲ. ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ ಪ್ರಾಹಾ.